ಹಿಂದಿ ಮೂಲ: ವೊ ಮೇರಾ ಹಿ ಪತಾ ಹೋತಾ ಹೈ
वो मेरा ही पता होता है Woh mera hi pata hota hai
ಕವಿ: ವಿನೋದ್ ಕುಮಾರ್ ಶುಕ್ಲಾ, ಛತ್ತೀಸ್ಗಢ್
Poet: Vinod Kumar Shukla, Chhattisgarh
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
Kannada translation: S. Jayasrinivasa Rao
ಅದು ನನ್ನದೇ ವಿಳಾಸವಾಗಿರುತ್ತೆ
ಕವಿತೆ ಬರೆಯುವಾಗ
ನನ್ನ ಧ್ಯಾನ ಇಹದಲ್ಲೇ ಇರುತ್ತೆ.
ಬರೆಯುವಾಗ ಯಾರೋ ಮನೆಯ
ಮುಚ್ಚಿದ ಬಾಗಿಲನ್ನು ತಟ್ಟಿದರೆ
ನನಗೆ ಕೇಳಿಸುತ್ತೆ,
ಹೋಗಿ ಬಾಗಿಲು ತೆರೆಯುತ್ತೇನೆ.
ಇದು ನಿಜ ವಿಷಯ,
ಯಾರೋ ಒಬ್ಬರು ಬಂದಿರುವರು,
ಯಾರದೋ ಮನೆಯ ವಿಳಾಸ
ಕೇಳಲು ಬಂದಿರಬಹುದು,
ನನ್ನ ಮನೆಯೇ ಎದುರಿಗೆ ಕಂಡಿರಬಹುದು,
ಬಂದು ನನ್ನ ಬಾಗಿಲು ತಟ್ಟಿರುವರು.
ಮತ್ತೆ ಈ ವಿಷಯವೂ ನಿಜ,
ನಾನು ಬಾಗಿಲು ತೆರೆದಾಗ
ಕವಿತೆಯು ಇದೇ ಹುಷಾರಿನಿಂದ ಬರುತ್ತೆ,
ಮತ್ತೆ ನಾನು ವಿಳಾಸ ಹೇಳಿದಾಗ
ಅದು ನನ್ನದೇ ವಿಳಾಸವಾಗಿರುತ್ತೆ.
29 ಏಪ್ರಿಲ್ 2008
*****


No comments:
Post a Comment