Wednesday, June 26, 2024

'ಜೂತಿಗಳು' Kannada translation of जूते by Kedarnath Singh

ಹಿಂದಿ ಮೂಲಜೂತೆ जूते Joote

ಕವಿ: ಕೇದಾರನಾಥ್ ಸಿಂಹ್ (1934 - 2018)ಉತ್ತರ್ ಪ್ರದೇಶ್

Poet: Kedarnath Singh, Uttar Pradesh 

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

Kannada translation: S. Jayasrinivasa Rao

 


ಜೂತಿಗಳು

 

ಸಭೆ ಎದ್ದಿತು

ಉಳಿದಿವೆ  ಜೂತಿಗಳು

ಈ ನಿರ್ಜನ ಸಭಾಂಗಣದಲ್ಲಿ

ಎರಡು ಚಕಿತ ದುಃಖಿತ

ಧೂಳು ಕವಿದ ಜೂತಿಗಳು

ಬಾಯ್ತೆರೆದ ಜೂತಿಗಳು 

ಯಾರೂ ಇಲ್ಲ ಇವಕ್ಕೆ ವಾರಸುದಾರರು

 

ಚೌಕೀದಾರ ಬಂದ

ನೋಡಿದ ಜೂತಿಗಳನ್ನ ಆತ

ಬಹಳ ಹೊತ್ತು ನಿಂತಿದ್ದ ಆತ

ಬಾಯ್ತೆರೆದ ಜೂತಿಗಳ ಮುಂದೆ  

ಯೋಚಿಸುತ್ತಿದ್ದ – 

ಷ್ಟೊಂದು ವಿಚಿತ್ರವಿದು

ಭಾಷಣಕಾರರು ಹೋಗಿಬಿಟ್ಟರು

ಎಲ್ಲಾ ಚರ್ಚೆಗಳು ಮುಗಿದು

ಕೊನೆಗೆ ಉಳಿದಿವೆ ಈ ಜೂತಿಗಳು

 

ಹೇಳುವುದಕ್ಕೆ ಈಗ ಏನೂ ಉಳಿದಿಲ್ಲದ

ಈ ನಿರ್ಜನ ಸಭಾಂಗಣದಲ್ಲಿ

ಎಷ್ಟೆಲ್ಲಾ ಎಷ್ಟೆಲ್ಲಾ 

ಹೇಳಿಬಿಟ್ಟಿವೆ ಈ ಜೂತಿಗಳು

 

***** 

 

जूते

 

सभा उठ गई
रह गए जूते
सूने हाल में दो चकित उदास
धूल भरे जूते
मुँहबाए जूते जिनका वारिस
कोई नहीं था

चौकीदार आया
उसने देखा जूतों को
फिर वह देर तक खड़ा रहा
मुँहबाए जूतों के सामने
सोचता रहा -
कितना अजीब है
कि वक्ता चले गए
और सारी बहस के अंत में
रह गए जूते

उस सूने हाल में
जहाँ कहने को अब कुछ नहीं था
कितना कुछ कितना कुछ
कह गए 
जूते

 

***** 

No comments:

Post a Comment

'ಜೂತಿಗಳು' Kannada translation of जूते by Kedarnath Singh

ಹಿಂದಿ   ಮೂಲ :  ಜೂತೆ   जूते   Joote ಕವಿ: ಕೇದಾರನಾಥ್ ಸಿಂಹ್   ( 1934 - 2018 ) ,  ಉತ್ತರ್ ಪ್ರದೇಶ್ Poet: Kedarnath Singh, Uttar Pradesh  ಕನ್ನಡ ಅನುವ...