ಹಿಂದಿ ಮೂಲ: ದೀವಾರ್ ಮೆ ಎಕ್ ಖಿಡ್ಕಿ ರಹತಿ ಥಿ
दीवार में एक खिड़की रहती थी
Deewar mein ek khidki rehti thi
ಕವಿ: ವಿನೋದ್ ಕುಮಾರ್ ಶುಕ್ಲಾ, ಛತ್ತೀಸ್ಗಢ್
Poet: VINOD KUMAR SHUKLA, Chhattisgarh
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
Kannada translation: S. Jayasrinivasa Rao
ಗೋಡೆಯಲ್ಲೊಂದು ಕಿಟಕಿ ಇರುತ್ತಿತ್ತು
ಗೋಡೆಯಲ್ಲೊಂದು ಕಿಟಕಿ ಇರುತ್ತಿತ್ತು,
ಒಂದು ಗುಡಿಸಲು, ಎರಡು ಕಾಲುದಾರಿ, ಒಂದು ನದಿ,
ಮತ್ತೆ ಒಂದೆರಡು ಕೊಳಗಳು ಇರುತ್ತಿದ್ದವು.
ಒಂದು ಆಕಾಶದ ಜತೆಯಲ್ಲಿ ಎಲ್ಲರ ಇರುವು.
ಜನರ ಬರೋಣ-ಹೋಗೋಣ ಆಗಾಗ ಇರುತ್ತಿತ್ತು,
ಮರಗಳು, ಹಕ್ಕಿಗಳು ಇರುತ್ತಿದ್ದವು,
ಕಿಟಕಿಯಿಂದಾಗಿ ಎಲ್ಲವೂ ಇರುತ್ತಿದ್ದವು,
ಇಲ್ಲದೆ ಇದ್ದಿದ್ದರೆ ಕಿಟಕಿ ತೆರೆದಿರಲಾರದು,
ಇರುವುದರಿಂದ ಕಿಟಕಿ ತೆರೆದಿರುತ್ತದೆ.
ಕಿಟಕಿಯಿಂದಾಚೆಗೆ ಗೋಡೆಯಲ್ಲಿ ಮನುಷ್ಯನೊಬ್ಬ ಇರುತ್ತಿದ್ದ.
*****


No comments:
Post a Comment