ಹಿಂದಿ ಮೂಲ: ಮಹಾನಗರ್ ಮೆ ಕವಿ
महानगर में कवि Mahanagar mein Kavi
ಕವಿ: ಕೇದಾರನಾಥ್ ಸಿಂಹ್ (1934 - 2018), ಉತ್ತರ್ ಪ್ರದೇಶ್
Poet: Kedarnath Singh, Uttar Pradesh
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
Kannada translation: S. Jayasrinivasa Rao
ಮಹಾನಗರದಲ್ಲಿ ಕವಿ
ಈ ಇಷ್ಟೊಂದು ದೊಡ್ಡ ಶಹರದಲ್ಲಿ
ಎಲ್ಲೋ ಇದ್ದಾನೆ ಒಬ್ಬ ಕವಿ
ಅವನಿರುವನು ಬಾವಿಯಲ್ಲಿರುವ ಮೌನದ ಹಾಗೆ
ಮೌನದಲ್ಲಿರುವ ಶಬ್ದಗಳ ಹಾಗೆ
ಶಬ್ದದಲ್ಲಿರುವ ರೆಕ್ಕೆಬಡಿತಗಳ ಹಾಗೆ
ಅವನು ಇರುವನು ಈ ಇಷ್ಟೊಂದು ದೊಡ್ಡ ಶಹರದಲ್ಲಿ
ಆದರೆ ಎಂದೂ ಏನೂ ಹೇಳಲ್ಲ
ಮಾತ್ರ ಯಾವಾಗಲೋ ಒಮ್ಮೆ
ಕಾರಣವಿಲ್ಲದೆ
ಪ್ರಕ್ಷುಬ್ಧನಾಗುತ್ತಾನೆ ಅವನು
ಆಗ ಎದ್ದು
ಹೊರಗೆ ಬರುತ್ತಾನೆ
ಎಲ್ಲಿಂದಲೋ ಹುಡುಕಿ ತರುತ್ತಾನೆ ಒಂದು ಸುಣ್ಣದಕಡ್ಡಿ
ಎದುರಿಗಿರುವ ಹೊಳೆಯುವ ಖಾಲಿ ಗೋಡೆಯ ಮೇಲೆ
ಬರೆಯುತ್ತಾನೆ ‘ಕ’
ಒಂದು ಸಣ್ಣ
ಸಾಧಾರಣವಾದ ‘ಕ’
ಬಹಳ ಹೊತ್ತಿನವರೆಗೆ ಇಡೀ ಶಹರದಲ್ಲಿ ಪ್ರತಿಧ್ವನಿಸುತ್ತದೆ
‘ಕ’ ಎಂದರೇನು
ಮುದುಕಿಯೊಬ್ಬಳು ಸೈನಿಕನನ್ನು ಕೇಳುವಳು
ಸೈನಿಕ
ಮೇಷ್ಟ್ರನ್ನು ಕೇಳುವನು
ಮೇಷ್ಟ್ರು ಕೇಳುವನು
ಕ್ಲಾಸಿನ ಅತಿ ಶಾಂತವಾದ ವಿದ್ಯಾರ್ಥಿಯನ್ನು
‘ಕ’ ಎಂದರೇನು
ಇಡೀ ಶಹರು ಕೇಳುತ್ತೆ
ಮತ್ತೆ ಈ ಇಷ್ಟೊಂದು ದೊಡ್ಡ ಶಹರದಲ್ಲಿ
ಯಾರಿಗೂ ಈ ವಿಷಯ ಗೊತ್ತಿಲ್ಲ
ಅದೇನೆಂದರೆ
ಆ ಕವಿ ಇದ್ದಾನಲ್ಲ
ಪ್ರತಿ ಸಲವೂ
ಕೈ ಎತ್ತಿದಾಗ
ಆ ಹೊಳೆಯುವ ಖಾಲಿ ಗೊಡೆಯ ಮೇಲೆ
‘ಕ’ ಬರೆದಾಗ
ಅವನ ಕೊಲೆಯಾಗುತ್ತದೆಂದು!
ಅಷ್ಟೇ, ಇದಷ್ಟೇ ಸತ್ಯ
ಉಳಿದದ್ದೆಲ್ಲಾ ಧ್ವನಿ
ಅಲಂಕಾರ
ರಸ-ಭೇದ
ಇದಕ್ಕಿಂತ ಹೆಚ್ಚು ಅವನ ಬಗ್ಗೆ
ನನಗೆ ಬೇರೇನೂ ಗೊತ್ತಿಲ್ಲ
ಎಂದು ವಿಷಾದದಿಂದ ಹೇಳುವೆ.
*****
महानगर में कवि
इस इतने बड़े शहर में
कहीं रहता है एक कवि
वह रहता है जैसे कुएँ में रहती है चुप्पी
जैसे चुप्पी में रहते हैं शब्द
जैसे शब्द में रहती है डैनों की फड़फड़ाहट
वह रहता है इस इतने बड़े शहर में
और कभी कुछ नहीं कहता
सिर्फ़ कभी-कभी
अकारण
वह हो जाता है बेचैन
फिर उठता है
निकलता है बाहर
कहीं से ढूँढ़कर ले आता है एक खड़िया
और सामने की साफ़ चमकती दीवार पर
लिखता है ‘क’
एक छोटा-सा
सादा-सा ‘क’
देर तक गूँजता है समूचे शहर में
‘क’ माने क्या
एक बुढ़िया पूछती है सिपाही से
सिपाही पूछता है
अध्यापक से
अध्यापक पूछता है
क्लास के सबसे ख़ामोश विद्यार्थी से
‘क’ माने क्या
सारा शहर पूछता है
और इस इतने बड़े शहर में
कोई नहीं जानता
कि वह जो कवि है
हर बार ज्यों ही
उठाता है हाथ
ज्यों ही उस साफ़ चमकती दीवार पर
लिखता है ‘क’
कर दिया जाता है क़त्ल!
बस इतना ही सच है
बाक़ी सब ध्वनि है
अलंकार है
रस-भेद है
मैं इससे अधिक उसके बारे में
कुछ नहीं जानता
मुझे खेद है।
*****